ಸಮಾಜದ ಋಣ ಪೂರೈಸಿ, ಉಪಕೃತರಾಗುವುದು ಎಲ್ಲರ ಕರ್ತವ್ಯ. ಖ್ಯಾತ ಸಾಹಿತಿ ಡಾ. ಶಂಭು ಬಳಿಗಾರ.


ಅಥಣಿ(ವರದಿ ಯಾದವಾಡ) ಜನ್ಮ ಕೊಟ್ಟ ಮಾತಾ ಪಿತರ, ಋಣ, ವಿದ್ಯಾ-ಬುದ್ಧಿ ಕಲಿಸಿದ ಗುರುವಿನ ಋಣ, ಸಮಾಜದ ಋಣ ಪೂರೈಸಿ, ಅವರಿಗೆ ಉಪಕೃತರಾಗುವುದು ಪ್ರತಿಯೊಬ್ಬರ ಧರ್ಮ ಎಂದು ಡಾ. ಶಂಭು ಬಳಿಗಾರ ಅಭಿಪ್ರಾಯಪಟ್ಟರು. ಮನುಷ್ಯ ಬದುಕಿನ ಪ್ರಕೃತಿ, ಸಂಸ್ಕೃತಿ-ವಿಕೃತಿಗಳ ಬಗ್ಗೆ ಅರ್ಥಪೂರ್ಣವಾಗಿ, ಮಾಮರ್ಿಕವಾಗಿ ವಿವರಿಸಿ, ಹಾಲು ಕಾಯ್ದು ಕೆನೆ, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಆಗುವುದಕ್ಕೆ 'ಹೆಪ್ಪು ಬಹಳ ಮುಖ್ಯ. ಅಂಥ 'ಹೆಪ್ಪು ಇಡುವ ಸಂಸ್ಕಾರ ಪ್ರಾಧ್ಯಾಪಕರಿಂದಾಗಿ ಮುಂದೆ ಮೊಸರು, ಬೆಣ್ಣೆ ಕೊನೆಗೆ ತುಪ್ಪವಾಗಿ ಪರಿಣಮಿಸಿ ಭವಿಷ್ಯ ನಿಮರ್ಿಸಿಕೊಳ್ಳಬೇಕೆಂದು ಖ್ಯಾತ ಸಾಹಿತಿ ಡಾ. ಶಂಭು ಬಳಿಗಾರ ಕರೆ ನೀಡಿದರು.

        ಮುಂದುವರೆದು ವಿದ್ಯೆಯ ಜೊತೆಗೆ ವಿನಯ, ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳಿಸಿದಾಗ, ವಿದ್ಯಾಥರ್ಿಗಳ ಜೀವನ-ವ್ಯಕ್ತಿತ್ವ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ಅವರಿಂದು ಕೆ.ಎಲ್.ಇ. ಸಂಸ್ಥೆಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ 2018-19 ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನ, ನೂತನ ಪದವಿ-ಪೂರ್ವ, ಪದವಿ ವಿದ್ಯಾಥರ್ಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. 

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರಾದ ಡಾ|| ಮಲ್ಲಿಕಾಜರ್ುನ ಹಂಜಿಯವರು ವಹಿಸಿ ಮಾತನಾಡುತ್ತಾ ಗುರು-ಹಿರಿಯರ ಉಪದೇಶಗಳನ್ನು ಬದುಕಿನಲ್ಲಿ ತಪ್ಪದೆ ಹೆಜ್ಜೆ ಹೆಜ್ಜೆಗೂ ಪಾಲಿಸಿಕೊಂಡು ನಡೆದಾಗ ಬದುಕಿಗೊಂದು ಅರ್ಥ ಪ್ರಾಪ್ತವಾಗುತ್ತದೆ. ಸರಳ ಜೀವನ ಮಾರ್ಗದಿಂದ, ಪ್ರಯತ್ನಪಟ್ಟು ತಮ್ಮ ಗುರಿ ತಲುಪಲು ವಿದ್ಯಾಥರ್ಿಗಳಿಗೆ ತಿಳಿಸಿದರು. ಆತ್ಮತೃಪ್ತಿಗಾಗಿ ಓದಿ, ಶಿಕ್ಷಕರನ್ನು ಪ್ರೀತಿಸಿ ಎಂದು ತಿಳಿಸಿ ಭಗತಸಿಂಗ್, ರಾಜಗುರು, ಸುಖದೇವ ಮುಂತಾದ ದೇಶಭಕ್ತರನ್ನು ಆದರ್ಶವಾಗಿಟ್ಟುಕೊಂಡು ಜೀವನ ಸಾಗಿಸಲು ಡಾ|| ಹಂಜಿ ಕರೆಕೊಟ್ಟರು. 

ಇದೇ ಸಮಾರಂಭದಲ್ಲಿ ಹಳೆಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿಕಲಚೇತನ ವಿದ್ಯಾಥರ್ಿಗಳಿಗೆ ನಗದು ಬಹುಮಾನ ನೀಡಲಾಯಿತು. ಕೆ-ಸೆಟ್ ಪರೀಕ್ಷೆಯಲ್ಲಿ ಪಾಸಾದ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. ಎಂ. ಎಸ್. ಕೆಂಚಗೌಡರ, ಪ್ರೊ. ಎಂ. ಎನ್. ಕುಲ್ಲೊಳ್ಳಿ,   ಪ್ರೊ. ಎಂ. ಎಂ. ಸುತಾರ, ಪ್ರೊ. ಎಂ. ಡಿ. ಸಿಂಗಾಡೆ, ಪ್ರೊ. ವ್ಹಿ. ಎಸ್. ಥೋರತ್ ಅವರನ್ನು ಮಹಾವಿದ್ಯಾಲಯದ ಪರವಾಗಿ ಗೌರವಿಸಲಾಯಿತು.

ಪ್ರಾರಂಭದಲ್ಲಿ ಕುಮಾರಿ ಭುವನೇಶ್ವರಿ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಪ್ರಾಚಾರ್ಯ ಡಾ. ಆರ್. ಎಫ್. ಇಂಚಲ ಸ್ವಾಗತಿಸಿದರು. ಡಾ. ಶ್ರೀಮತಿ ಕೆ. ಆರ್. ಸಿದ್ದಗಂಗಮ್ಮ ಪರಿಚಯಿಸಿದರು. ಪ್ರೊ. ಎಂ. ಬಿ. ಯಾದಗುಡೆ ಬಹುಮಾನ ವಿತರಣೆ ನಡೆಸಿಕೊಟ್ಟರು. ಡಾ. ವಿಜಯ ಕಾಂಬಳೆ, ಕುಮಾರಿ ಅಂಕುಶ ಮಾಲಗಾಂವೆ, ಶ್ರೀಮತಿ ಪೂಣರ್ಿಮಾ ಮಿಣಚೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಆರ್. ಎಂ. ಬಡಿಗೇರ ವಂದಿಸಿದರು.

      ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ  ಎಚ್. ಆರ್. ಚಮಕೇರಿ,  ಪ್ರಕಾಶ ಪಾಟೀಲ,  ವಿಜಯಕುಮಾರ ಬುಲರ್ಿ, ಶಿವಪುತ್ರ ಯಾದವಾಡ,  , ನಿವೃತ್ತ ಶಿಕ್ಷಕ ಎಂ. ಎನ್. ಚಿಂಚೊಳ್ಳಿ,  ಮಲ್ಲಿಕಾಜರ್ುನ ಸಂಕ, ಮಲ್ಲಿಕಾಜರ್ುನ ಕನಶೆಟ್ಟಿ, ಸಿ.ಎ.ಇಟ್ನಾಳಮಠ ಶ್ರೀಶೈಲ ಪಾಟೀಲ, ನಾರಾಯಣ ಆನಿಖಿಂಡಿ, ಉಪಸ್ಥಿತರಿದ್ದರು.